ನವ ಭಾರತ ನಿರ್ಮಾಪಕರಲ್ಲಿ ಸಾವರ್ಕರರೂ ಒಬ್ಬರು. “ಜಯೋಸ್ತುತೇ ಶ್ರೀ ಮಹನ್ಮಂಗಲೇ ಶಿವಾಸ್ಪದೂ ಶುಭಧೇ | ಸ್ವತಂತ್ರ್ಯತೇ ಭಗವತೀ ತ್ವಾಮೇಹಂ ಯಶೋಯುತಾಂ ವಂದೇ ||” ಎಂಬ ಸ್ವಾತಂತ್ರ್ಯ ಮಂತ್ರವನ್ನು ಹೊತ್ತಿದ ಮಹಾನ್ ಹೋರಾಟಗಾರ.
ಇವರು ಮಹಾರಾಷ್ಟದ ನಾಸಿಕ ಜಿಲ್ಲೆಯ ಭಗೂರಿನಲ್ಲಿ 1883ನೇ ಇಸವಿಯ ಮೇ 28ರಂದು ದಾಮೋದರ್ ಪಂತ್ ಸಾವರ್ಕರ್ ಹಾಗೂ ರಾಧಬಾಯಿಯವರ ಎರಡನೇ ಮಗನಾಗಿ ಜನ್ಮತಾಳಿದರು. ಇವರ ಅಣ್ಣನ ಹೆಸರು ಗಣೇಶ ಸಾವರ್ಕರ್. ಮನೆಯವರು ಸಲಿಗೆಯಿಂದ ವಿನಾಯಕರನ್ನು ತಾತ್ಯ ಎಂದು ಗಣೇಶನನ್ನು ಬಾಬಾ ಎಂದೂ ಕರೆಯುತ್ತಿದ್ದರು.
ಚಾಪೇಕರ ಸಹೋದರರ ವೀರ ಕೃತ್ಯಗಳಿಂದ ಪ್ರಭಾವಿತರಾದ ವಿನಾಯಕರು ಮಾಧ್ಯಮಿಕ ಶಾಲೆಯ ನಂತರ ಪುಣೆಯ ಫರ್ಗುಸನ್ ಮಹಾವಿದ್ಯಾಲಯವನ್ನು ಸೇರಿ ತಮ್ಮ ಗೆಳೆಯರ ಜೊತೆ ಕೂಡಿಕೊಂಡು ಅನೇಕ ಕ್ರಾಂತಿಕಾರ್ಯಗಳನ್ನು ಮಾಡಿದರು. ಅದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬ್ರಿಟಿಷರ ವಸ್ತುಗಳನ್ನು ದಹನ ಮಾಡುವುದು ಪ್ರಮುಖವಾಗಿತ್ತು. ಅವರ ಈ ನವ ಕ್ರಾಂತಿಯ ಹೆಸರೇ ‘ಅಭಿನವ ಭಾರತ’ ಇದು ಭಾರತದಲ್ಲಿ ಹತ್ತಿದ ಮೊದಲ ಸ್ವಾತಂತ್ರ್ಯದ ಕಿಡಿ.
ಪದವಿ ಪರೀಕ್ಷೆಯ ನಂತರ ಕಾನೂನು ವ್ಯಾಸಂಗಕ್ಕೆ ಮುಂಬಯಿನಗರಕ್ಕೆ ತೆರಳಿ ಅನೇಕ ಲೇಖನಗಳನ್ನು ಬರೆದರು. ಆ ಲೇಖನಗಳ ಪ್ರಸಿದ್ಧಿಯಿಂದಲೇ ಇವರಿಗೆ ಲಂಡನ್ನಿನ ಭಾರತ ಭವನವು ವಿದ್ಯಾರ್ಥಿ ವೇತನವನ್ನು ಕೊಡಲು ನಿರ್ಧರಿಸಿತಲ್ಲದೆ ಲಂಡನ್ನಿಗೆ ಕರೆಸಿಕೊಂಡಿತು. 1906ರಲ್ಲಿ ಲಂಡನ್ನಿನಲ್ಲಿ ‘ಮ್ಯಾಝಿನಿ’ ಎಂಬ ಪುಸ್ತಕವನ್ನು ಬರೆದು ಅದನ್ನು ಭಾರತಕ್ಕೆ ಮುದ್ರಣಕ್ಕೆಂದು ಕಳುಹಿಸಿದಾಗ ಅದನ್ನು ಆಂಗ್ಲ ಸರ್ಕಾರವು ಮುಟ್ಟುಗೋಲು ಹಾಕಿತು. ಭಾರತದ ಸ್ವಾತಂತ್ರ್ಯಕ್ಕಾಗಿ ಭಾರತೀಯರಲ್ಲಿ ಕ್ರಾಂತಿಯನ್ನು ಹೂಡುವ ಸಲುವಾಗಿ, ಅವರು ‘1857ನೇ ಮೊದಲ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಪುಸ್ತಕವನ್ನು ಬರೆದರು. ಅದರಲ್ಲಿ 1875ನೇ ಇಸವಿಯಲ್ಲಿ ಜರುಗಿದ ಎಲ್ಲಾ ಕ್ರಾಂತಿಕಾರ್ಯದ ಸಮಗ್ರ ಇತಿಹಾಸ ಬರೆದಿದ್ದರು.
ಹಾಗೂ ಆ ಆಂದೋಲನದ ನಿಜರೂಪ ವರ್ಣಿಸಿದ್ದರು. ಈ ಪುಸ್ತಕವನ್ನೂ ಮುದ್ರಣಕ್ಕೆಂದು ಬಾಬಾರವರಿಗೆ ರವಾನಿಸಿದರು. ಆದರೆ ಈ ವಿಷಯ ಬ್ರಿಟಿಷರಿಗೆ ತಿಳಿಯಿತು. ‘ಸಾವರ್ಕರ್ ರವರ ಪುಸ್ತಕವೆಂದರೆ ದೇಶದ್ರೋಹದ ಹೊತ್ತಿಗೆ! ಎಂಬುದೇ ಬ್ರಿಡಿಷರ ಧೋರಣೆಯಾಗಿತ್ತು’ ಆದ್ದರಿಂದ ಬಾಬಾರವರ ಪುಸ್ತಕವನ್ನು ಫ್ರಾನ್ಸಿಗೆ ರವಾನಿಸಿದರು. ಫ್ರಾನ್ಸಿನಲ್ಲಿ ಅವರ ಭಾಷೆಗೆ ತರ್ಜುಮೆ ಮಾಡಿ ಮುದ್ರಿಸಿ ಭಾರತಕ್ಕೆ ಕಳುಹಿಸಿದರು. ಆದರೆ ಅದೂ ಸಹ ಬ್ರಿಟಿಷರಿಗೆ ತಿಳಿಯಿತು. ಪುಸ್ತಕಕ್ಕೆ ಮುಟ್ಟುಗೋಲು ಹಾಕುವುದಲ್ಲದೆ ಬಾಬಾರವರನ್ನು ಸೆರೆಮನೆಗೆ ತಳ್ಳಿದರು.
ತಾತ್ಯಾ ಹಾಗು ಅಭಿನವ ಭಾರತ, ಭಾರತದ ಕಾರ್ಯಕರ್ತರಿಗೆ ರಹಸ್ಯವಾಗಿ ಮದ್ದುಗುಂಡುಗಳನ್ನು ರವಾನಿಸುತ್ತಿದ್ದರು. ಇದರ ಪರಿಣಮದಂದ ಜ್ಯಾಕ್ಸನ್, ಕರ್ಝನ್‍ವ್ಯಾಲಿ ಮೊದಲಾದ ಆಂಗ್ಲ ಆಧಿಕಾರಿಗಳ ಕೊಲೆಯಾಯಿತು ಇದರ ಹಿಂದೆ ಸಾವರ್ಕರ್ರವರ ಕೈವಾಡ ಇರುವುದು ಬ್ರಿಟಿಷರಿಗೆ ತಿಳಿಯಿತು. ಈ ಕೊಲೆಯ ಸಲುವಾಗಿ ಬ್ರಿಟಿಷ ಸರ್ಕಾರವು ಇವರನ್ನು ಬಂದಿಸಿತು. ಇವರ ಈ ಕಾರ್ಯಕ್ಕೆ 50 ವರ್ಷಗಳ ಕಠಿಣ ಶಿಕ್ಷೆಯನ್ನು ಅನುಭವಿಸಿದ್ದರು. ನಂತರ ಅಂಡಮಾನಿನ ಕಾರಾಗೃಹಕ್ಕೆ ಕಳುಹಿಸಿದರು.
ಇವರು ಕಾರಾಗೃಹದಲ್ಲೇ ಕಮಲ ಗೋಮಾಂತರ, ಮಹಾಸಾಗರ ಮುಂತಾದ ಕವನಗಳನ್ನು ಬರೆದರಲ್ಲದೇ ಕಾರಾಗೃಹದಲ್ಲೂ ಪ್ರಚಲಿತದಲ್ಲಿದ್ದ ಜಾತಿ ಪದ್ಧತಿಯನ್ನು ಹೋಗಲಾಡಿಸಿದರು. ಭಾರತೀಯರೆಲ್ಲರ ಒತ್ತಾಯದ ಮೇರೆಗೆ 1922ರಂದು ಆಂಗ್ಲ ಸರ್ಕಾರ ಇವರನ್ನು ಬಿಡುಗಡೆ ಮಾಡಿತು. 1937ರಲ್ಲಿಇವರ ಮೇಲಿನ ಎರಡೂ ಅಪಾದನೆಗಳನ್ನು ತೆಗೆದುಹಾಕಲಾಯಿತು. ಇದರಿಂದ್ದ ರಾಜಕೀಯಕ್ಕೆ ಧುಮುಕಿ ಹಿಂದೂ ಮಹಾಸಭೆಯ ಅಧ್ಯಕ್ಷರಾದರು. ಇಂತಹ ಸಹಸ್ರಸ್ವಾತಂತ್ರ್ಯ ಹೋರಾಟಗಾರರ ಫಲವಾಗಿ 1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು.
ಕೋಟ್ಯಾಂತರ ಜನರ ಮನಸ್ಸುನು ಗೆದ್ದ ಇವರು ತಮ್ಮ 83ನೇ ವಯಸ್ಸಿನಲ್ಲಿ ಅಂದರೆ ಜೂನ್ 26, 1966ರಂದು ಹುತಾತ್ಮರಾದರು.