ತಾಯ್ನಾಡ ಪೂಜೆ
ತಾಯ್ನಾಡಿಗೆ ನಮಿಸುವ ಬನ್ನಿ
ನಾವೆಲ್ಲರು
ತಾಯ್ನಾಡಿಗೆ ನಮಿಸುವ ಬನ್ನಿ
ಭಾರತೀಗೆ ಜೈ ಎನ್ನಿ
ರಾಷ್ಟ್ರಗೀತೆ ಹಾಡುವ ಬನ್ನಿ
ಸಾರೆ ಜಹಾ ಸೆ ಅಚ್ಚಾ ಹಾಡ ಕೂಡಿ ಹಾಡುವ ಬನ್ನಿ
ತಾಯ್ನಾಡಿಗೆ ನಮಿಸುವ ಬನ್ನಿ
ಯೋಧರ ನೆನೆಯುವ ಬನ್ನಿ
ನಾವೆಲ್ಲರು ಒಂದೇ ಎನ್ನಿ
ಜಾತಿ ಮತ ಭೇದವ ಮರೆತು ನಾವು ಭಾರತೀಯರೆನ್ನಿ
ತಾಯ್ನಾಡಿಗೆ ನಮಿಸುವ ಬನ್ನಿ
ಈ ದೇಶ ನನ್ನದು ಎನ್ನಿ
ನನ್ನ ದೇಶ ಸ್ವರ್ಗ ಎನ್ನಿ
ಗಾಂಧಿ ಆಜಾದ್ ಸಾವರ್ಕರರ ಹೆಮ್ಮೆಯ ದೇಶ ಇದುವೆ ಎನ್ನಿ
ತಾಯ್ನಾಡಿಗೆ ನಮಿಸುವ ಬನ್ನಿ
Prashanth -(ವಿಕಟಕಪಿ)