ಸ್ವಚ್ಛತೆಯ ಕಡೆ ನಡಿಗೆಗೆ

ಸ್ವಚ್ಛ ಪರಿಸರವೆಂಬ ಮಂತ್ರ ನಮ್ಮದಾಗಲಿ ಎಂದಿಗೂ

ಧರಣಿ ಮಂಡಲಮಧ್ಯದೊಳಗೆ ಮೆರೆಯುತಿಹ ಕರ್ನಾಟ ರಾಜ್ಯದಿ

ಇರುವುದೊಂದೆ IT capital ಅದುವೆ Bangalore ನಗರವು


ಇರುವ ಗಾರ್ಡನ್‍ಗಳಾ ನಡುವೆ

Garbageಎಂಬ ಸಮಸ್ಯೆಯೊಂದು

ತರುತಲಿಹುದು ನಮಗೆ ತೊಂದರೆ

ಡೆಂಗು ಮಲೆರಿಯದೊಂದಿಗೆ


ಅಣ್ಣ ಬನ್ನಿ ಅಕ್ಕ ಬನ್ನಿ

ಗೆಳೆಯ ಗೆಳತಿಯರೆಲ್ಲ ಬನ್ನಿ

ನಮ್ಮ ಜೊತೆಯಲಿ ಹೆಜ್ಜೆ ಹಾಕಿ

ಸ್ವಚ್ಛತೆಯ ಕಡೆ ನಡಿಗೆಗೆ ||ಸ್ವಚ್ಛ ಪರಿಸರವೆಂಬ||


ಒಂದು ಬಿನ್ನಹ ಜನರೆ ಕೇಳಿ

ಕಸವ ಬೀದಿಗೆ ಎಸೆಯಬೇಡಿ

ಒಣಕಸ ಹಸಿ ಕಸವ ವಿಂಗಡಿಸಿ ನಿಮ್ಮ ಮನೆಯಲಿ

ನಮ್ಮ ದೇಶ ನಮ್ಮ ಮನೆಯು

ಸ್ವಚ್ಛತೆಯೆ ನಮಗೆ ಮುಖ್ಯವು

ಸ್ವಚ್ಛ ಪರಿಸರದಿಂದ ಇಲ್ಲಾ ಯಾವ ರೋಗ ರುಜಿನವು ||ಸ್ವಚ್ಛ ಪರಿಸರವೆಂಬ||


Prashanth -(ವಿಕಟಕಪಿ)