"ಈ ನನ್ನ ರಕ್ತದಲ್ಲಿ ಕ್ರಾಂತಿಕಾರಿಯ ಕಿಚ್ಚು ಕಾಣಿಸುತ್ತಿದೆಯೇ? ಈಗಲಾದರೂ ಬ್ರಿಟೀಷ್ ಅಧಿಕಾರಿ ಕಲೆಕ್ಟರ್ ಜಾಕ್ಸನ್ ನ ಹತ್ಯೆ ಮಾಡಲು ಅವಕಾಶ ಕೊಡಿ"

-ಅನಂತ ಲಕ್ಷ್ಮಣ ಕಾನ್ಹೇರೆ



     ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನೂರಾರು ಜನ ತಮ್ಮ ಜೀವನವನ್ನೇ ಪಣವಾಗಿಸಿದ್ದರು, ನಾವು ಹಲವಾರು ಯುವಕರು, ಮಹಿಳೆಯರು ಮತ್ತು ಇತರ ಮಹನೀಯರ ವೀರೋಚಿತ ಹೋರಾಟದ ಬಗ್ಗೆ ತಿಳಿದಿದ್ದೇವೆ. ಆದರೆ ನಾವಿಂದು ತನ್ನ ಎಂಬತ್ತನೆಯ ವಯಸ್ಸಿನಲ್ಲಿ ಸೈನ್ಯವನ್ನು ಮುನ್ನಡೆಸಿ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ದಿüೀರ ಯೋಧ ಕುನ್ವರ್ ಸಿಂಗ್‍ರ ಜೀವನ ಮತ್ತು ಸಾಧನೆಯ ಬಗ್ಗೆ ಕಿರು ಮಾಹಿತಿಯನ್ನು ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಈ ಬರಹದಲ್ಲಿ ಮಾಡಿದ್ದೇವೆ..

    ಕುನ್ವರ್ ಸಿಂಗರು ಉಜ್ಜಯಿನೀ ರಜಪೂತರ ವಂಶಸ್ಥರು. ಇವರ ಜನನ 1777ರ ನವೆಂಬರ್ 13ರಂದು ಬಿಹಾರ್ ರಾಜ್ಯದ ಶಹಬಾದ್ ಜಿಲ್ಲೆಯ ಜಗದೀಶ್‍ಪುರದಲ್ಲಾಯಿತು. ಇವರ ತಂದೆ ರಾಜ ಶಹಬeóÁದಾ ಸಿಂಗ್ ಹಾಗೂ ತಾಯಿ ರಾಣಿ ಪ0ಚರತನ್ ಕುವರಿದೇವಿ ಸಿಂಗ್. ಯಥಾವಿದಿüಯಾಗಿ ತಮ್ಮ ತಂದೆಯವರ ಮರಣದ ನಂತರ ಇವರು ರಾಜ ಪಟ್ಟವನ್ನು ಸ್ವೀಕರಿಸಿದರು.

    ಅದು 1857ರ ಮಹಾಸಂಗ್ರಾಮದ ಸಮಯ. ದೇಶಾದ್ಯಂತ ಸ್ವಾತ0ತ್ರ್ಯಕ್ಕಾಗಿ ಮೊದಲ ಕಹಳೆ ಮೊಳಗಿತ್ತು. ಸ್ವಾತ0ತ್ರ್ಯವೆಂಬ ಹಂಬಲದ ಬೀಜ ಮೊಳಕೆಯೊಡೆದು ಚಿಗುರು ಮೂಡಿದ ಸಮಯವದು. ವಯಸ್ಸು ಎಂಬತ್ತಾದರೆ ಸಾಕು ಸಹಜವಾಗಿ ನಮ್ಮಲ್ಲಿ ಬರುವ ಭಾವ, ಇನ್ನೇನು ಮಾಡುವುದು ಉಳಿದಿಲ್ಲಾ. ಇದ್ದಷ್ಟು ದಿನ ಭಗವಂತನ ಧ್ಯಾನ ಮಾಡುತ್ತಾ ಕಾಲವನ್ನು ಕಳೆಯೋಣ ಎಂಬ ಸಹಜ ಮನಸ್ಥಿತಿ ಇರುವವರ ನಡುವೆ ಕುನ್ವರ್ ಸಿಂಗ್‍ರವರು ಬಿಹಾರದಲ್ಲಿ ದಂಗೆ ನಡೆಸಿ ಸೈನ್ಯವನ್ನು ಮುನ್ನಡೆಸಿ ಬ್ರಿಟೀಷರ ನೆಮ್ಮದಿ ಕೆಡಸಿದ್ದು ಹೆಮ್ಮೆಯ ವಿಷಯವೇ ಸರಿ. ಇದಕ್ಕೆ ಸಾಕ್ಷಿ ಎಂಬಂತೆ ಬ್ರಿಟೀμï ನ್ಯಾಯಾದಿüಕಾರಿಯೊಬ್ಬರು ಇವರನ್ನು ಹೊಗಳುತ್ತಾ ಹೀಗೆ ಹೇಳಿದ್ದಾರೆ. “ಕುನ್ವರ್ ಸಿಂಗ್, ಆರು ಅಡಿ ಎತ್ತರದ ಕಟ್ಟಾಳು ಅಗಲವಾದ ಮುಖ, ಬೃಹತ್ ಗಾತ್ರದ ಬಾಹುಗಳು. ಯುದ್ಧ ಕೌಶಲ್ಯದಲ್ಲಿ ನಿಪುಣತೆ, ಕತ್ತಿ ವರೆಸೆ ಹಾಗೂ ಕುದುರೆ ಸವಾರಿ ಈತನ ಹವ್ಯಾಸ. ಇಂತಹ ಒಬ್ಬ ವೀರನನ್ನು ನೋಡಿದರೆ ಸಾಕು ಎದುರಾಳಿಗಳು ಹೆದರುವುದರಲ್ಲಿ ಯಾವುದೇ ಸಂಶಯವಿಲ್ಲ”. ಇನ್ನೊಂದು ಕಡೆ ಬ್ರಿಟೀಷರು ಉಲ್ಲೇಖಿಸುವಂತೆ ಯುದ್ಧ ಕೌಶಲ್ಯದಲ್ಲಿ ಇವರದ್ದು ಅದೆಂತಹ ಪರಿಣಿತಿ ಎಂದರೆ ನಿಮಿಷದಲ್ಲಿ ತನ್ನ ಯುದ್ಧ ತಂತ್ರಗಳನ್ನು ಬದಲಿಸಿ ಎದುರಾಳಿಗಳ ದಿಕ್ಕು ತಪ್ಪಿಸುತ್ತಿದ್ದರಂತೆ. ವಿಶೇಷವೆಂದರೆ ಗೆರಿಲ್ಲಾ ಎಂಬ ಯುದ್ಧ ತಂತ್ರವು ಎದುರಾಳಿಗಳನ್ನು ದಿಕ್ಕು ತಪ್ಪಿಸುವ ಅಪ್ರತಿಮ ತಂತ್ರ. ಭಾರತದಲ್ಲಿ ಈ ತಂತ್ರವನ್ನು ಅರಿತಿದ್ದ ರಾಜರು ಇಬ್ಬರೇ. ಶಿವಾಜಿ ಮಹಾರಾಜರು ಒಬ್ಬರಾದರೆ ಮತ್ತೋರ್ವರು ಕುನ್ವರ್ ಸಿಂಗ್.

    ತಮ್ಮ ಈ ಅಪ್ರತಿಮ ಯುದ್ಧ ಕೌಶಲ್ಯದಿಂದ ಬ್ರಿಟೀಷರನ್ನು ಒಂದೂವರೆ ವರ್ಷದವರೆಗೂ ಕಾಡುವುದೆಂದರೆ ಸಾಮಾನ್ಯ ಮಾತಲ್ಲ. ಇವರ ಈ ಕಾರ್ಯದಲ್ಲಿ ಸಹಾಯಕ್ಕೆ ನಿಂತವರು ಸಹೋದರ ಬಾಬು ಅಮರ್ ಸಿಂಗ್ ಹಾಗೂ ಸೇನಾದಿüಪತಿ ಹರೇಕೃಷ್ಣ ಸಿಂಗ್. ಇವರ ಸೈನ್ಯವನ್ನು ಸೋಲಿಸುವುದು ಬ್ರಿಟೀಷರಿಗೆ ಸಾಮಾನ್ಯವಾದ ಮಾತಾಗಿರಲಿಲ್ಲ. ಅಂದು ಆಗಸ್ಟ್ 3ನೇ ತಾರೀಖು ಬ್ರಿಟೀμï ಅದಿüಕಾರಿ ಒಚಿರಿoಡಿ ಗಿiಟಿಛಿeಟಿಣ ಇಥಿಡಿeರ ನೇತೃತ್ವದ ಸೈನ್ಯವು ಕುನ್ವರ್ ಸಿಂಗ್‍ರ ಸೈನ್ಯದ ಒಂದು ತಂಡವನ್ನು ಸೋಲಿಸಿ ಆಕ್ರಮಿಸಿಕೊಂಡಿದ್ದ ಜಗದೀಶ್‍ಪುರವನ್ನು ನಾಶಪಡಿಸಿತು. ಈ ವಿಷಯ ತಿಳಿದ ಸಿಂಗ್‍ರವರು ಮತ್ತು ಇತರೆ ಸೈನಿಕರು ತಪ್ಪಿಸಿಕೊಳ್ಳಲು ಗಂಗಾ ನದಿಯನ್ನು ದಾಟಬೇಕಿತ್ತು. ಮತ್ತೋರ್ವ ಬ್ರಿಟೀμï ಅದಿüಕಾರಿ ಃಡಿigಚಿಜieಡಿ ಆougಟಚಿsನ ಸೈನ್ಯವು ಇವರು ಹೋಗುತ್ತಿದ್ದ ನೌಕೆಗಳ ಮೇಲೆ ಗುಂಡು ಹಾರಿಸಲು ಶುರು ಮಾಡಿದರು. ಹಾರಿಸಿದ ಗುಂಡೊಂದು ಕುನ್ವರ್ ಸಿಂಗ್‍ರವರ ಎಡಗೈಗೆ ತಗುಲಿತು. ಅತ್ಯಂತ ನೋವು ಕೊಡುತ್ತಿದ್ದನ್ನು ಸಹಿಸದ ಸಿಂಗ್‍ರವರು ಸೊಂಟದಲ್ಲಿದ್ದ ಕತ್ತಿಯನ್ನು ಎಳೆದು, ತಮ್ಮ ಮುಂದಿನ ಯೋಜನೆಗಳಿಗೆ ಈ ಪೆಟ್ಟು ಅಡ್ಡಿ ಬರಬಾರದೆಂದು ಯೋಚಿಸಿ, ಗಂಗೆಗೆ ವಂದಿಸುತ್ತಾ “ತಾಯಿ, ನಿನಗೆ ಮಂಗಳಮಯವಾದ ವಸ್ತುಗಳನ್ನು ಬಾಗಿನವನ್ನಾಗಿ ನೀಡಬೇಕಾದ ನಾನು ರಕ್ತಸಿಕ್ತವಾದ ಈ ನನ್ನ ಎಡಗೈಯನ್ನು ಅರ್ಪಿಸುತ್ತಿದ್ದೇನೆ. ಸ್ವೀಕರಿಸಿ ನನ್ನನ್ನು ಕ್ಷಮಿಸು” ಎಂದು ಹೇಳುತ್ತಾ ತಮ್ಮ ಎಡಗೈಯನ್ನು ಗಂಗೆಗೆ ಅರ್ಪಿಸಿದರು.

    ಒಂದೂವರೆ ವರ್ಷಗಳ ಕಾಲ ಒಂದೇ ಕೈಯಲ್ಲಿ ಯುದ್ಧವನ್ನು ಮಾಡುವುದು, ಜಯಿಸುವುದೆಂದರೆ ಸಾಮಾನ್ಯವಾದ ಮಾತಲ್ಲ. 1858ರ ಮಾರ್ಚಿನಲ್ಲಿ ಅeóÁಮ್‍ಘರನ್ನು ಆಕ್ರಮಿಸಿಕೊಂಡು ಬ್ರಿಟೀಷರ ದಾಳಿಗಳನ್ನು ತಡೆಯುತ್ತಿದ್ದರು. ಅದೇ ಸಮಯಕ್ಕೆ ಬ್ರಿಟೀμï ಅದಿüಕಾರಿ ಃಡಿigಚಿಜieಡಿ ಆougಟಚಿs ಸಿಂಗರ ಹುಟ್ಟೂರಿನತ್ತ ದಾಳಿ ಮಾಡುತ್ತಿರುವ ಸುದ್ಧಿ ತಿಳಿದು ತಮ್ಮ ತವರೂರ ರಕ್ಷಣೆಗಾಗಿ ತೆರಳಿದರು. ಏಪ್ರಿಲ್ 23ರಂದು ಮಾರ್ಗ ಮಧ್ಯದಲ್ಲಿ ಸಿಕ್ಕ ಜಗದೀಶ್‍ಪುರವನ್ನು ಮತ್ತೊಮ್ಮೆ ಜಯಿಸಿ ತಮ್ಮ ಹುಟ್ಟೂರನ್ನೂ ಸಹ ಸ್ವತಂತ್ರ್ಯಗೊಳಿಸಿ ಬ್ರಿಟೀಷರ ಧ್ವಜವನ್ನು ಕಿತ್ತೊಗೆದು ತಮ್ಮ ಧ್ವಜವನ್ನು ಹಾರಿಸಿದರು. ಎಡಗೈಗೆ ಆದ ಪೆಟ್ಟು ತೀವ್ರವಾಗಿ 1858ರ ಏಪ್ರಿಲ್ 28ರಂದು ತಮ್ಮ ಹುಟ್ಟೂರಿನಲ್ಲಿ ನಿಧನರಾದರು.

    ಇಂತಹ ಮಹಾನ್ ಹೋರಾಟಗಾರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ಇಂದು ನಾವು ಸ್ವತಂತ್ರ್ಯವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ವೀರ ಪುತ್ರರನ್ನು ಕಂಡ ಭಾರತ ಮಾತೆಯೇ ಧನ್ಯ.